24/05/2021
#ಹಸಿರು_ನನ್ನುಸಿರು ನಮ್ಮ ಜೀವದ ಉಸಿರು. ಶುದ್ಧ ಆಮ್ಲಜನಕ ಒದಗಿಸುವ, ಭೂಮಿಯನ್ನು ತಂಪಾಗಿಸುವ ಮರ ಗಿಡಗಳನ್ನು ನೆಟ್ಟು ಪೋಷಿಸುವ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೀತಿ, ಕಾಳಜಿ ಮೂಡಿಸುವ ಕಾರ್ಯವನ್ನು #ಕೆವಿಜಿ_ಸುಳ್ಯ #ನೆಹರೂ_ಮೆಮೋರಿಯಲ್_ಕಾಲೇಜು ಸಸ್ಯಶ್ಯಾಮಲ #ನೇಚರ್_ಕ್ಲಬ್ ಘಟಕ ಕಳೆದ ಹಲವಾರು ವರ್ಷಗಳಿಂದ ನಡೆಸುತ್ತಾ ಬಂದಿದೆ. ಪ್ರಸ್ತುತ Corona Lockdown ಸಂದರ್ಭದಲ್ಲಿ ಬಾಹ್ಯವಾಗಿ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವ ಅವಕಾಶ ಇಲ್ಲದಿರುವುದರಿಂದ ಈ ಬಾರಿ ನಮಗೆ ಉಸಿರು ಕೊಡೋ ಹಸಿರಿನ ಸಂರಕ್ಷಣೆಗೆ ಗಿಡ ನೆಡುವ ಅಭಿಯಾನವನ್ನು ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಮೂಲಕ ಮುಂದುವರಿಸುವ ಪ್ರಯತ್ನ ನಮ್ಮದು.
#ಹಸಿರು_ನನ್ನುಸಿರು ಎನ್ನುವ hashtag ಬಳಸಿ ಪರಿಸರ ಪ್ರೇಮಿಗಳಾದ ತಾವು ನೆಟ್ಟ ಗಿಡದ ಫೋಟೋ ಅಥವಾ ವೀಡಿಯೋ ತುಣುಕನ್ನು Facebook Instagram ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮ ಕನಿಷ್ಟ ಐದು ಮಂದಿ ಸ್ನೇಹಿತರಲ್ಲಿ ಮುಂದುವರಿಯುವಂತೆ ಪ್ರೇರೇಪಿಸುವಿರಿ ಎಂಬುದು ನಮ್ಮ ಅಪೇಕ್ಷೆ.
ಮಾಸ್ಕ್ ಧರಿಸಿ, ಅಂತರ ಕಾಪಾಡಿ.. ಮಾರಕ ಕೊರೋನ COVID 19 ಸರಪಣಿ ಕೊನೆಗೊಳ್ಳಲಿ.. ನಮ್ಮ ಪರಿಸರ ಮತ್ತು ಜೀವವೈವಿಧ್ಯ ಸಂರಕ್ಷಣೆಗೆ ಪೂರಕ ಗಿಡ ನೆಡುವ ಕಾಯಕ.. ಇದು ನಿರಂತರವಾಗಿರಲಿ ಎಂಬ ನಿರೀಕ್ಷೆಗಳೊಂದಿಗೆ 🌳
ಕೃತಜ್ಞತೆಗಳು 🌱
Since many years Sasyashyamala has been promoting afforestation and plant conservation in Government Higher primary schools of selected places in Sullia Taluk. But due to the pandemic situation, as we are not able to directly reach out to the public, this time we have initiated encouragement of plantation through social media.
Plant a tree and post your photos or short video clips and tag #ಹಸಿರು_ನನ್ನುಸಿರು & request minimum 5 of your friends to continue the chain.
Let's spread Greenery ...rise oxygen level Globally...
- NMC nature club
Thank you